KSP ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ 2026: 3991 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 3991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. PUC ಪಾಸ್ ಅಭ್ಯರ್ಥಿಗಳು ಜುಲೈ 3, 2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವೇತನ ₹37,500 ರಿಂದ ₹76,100.
ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ (KSP) ಸುವರ್ಣಾವಕಾಶ ಲಭ್ಯವಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 2026ನೇ ಸಾಲಿನ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಒಟ್ಟು 3991 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.
ಈ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ (371J) ವಿಭಾಗದಲ್ಲಿ 596 ಹುದ್ದೆಗಳು ಹಾಗೂ ಮಿಕ್ಕುಳಿ (ಒಕ್ಕಲಿಗ) ವಿಭಾಗದಲ್ಲಿ 3395 ಹುದ್ದೆಗಳು ಲಭ್ಯವಿವೆ. PUC ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ಮಾಹಿತಿ
- ಸಂಸ್ಥೆ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP)
- ಹುದ್ದೆ ಹೆಸರು: ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್
- ಒಟ್ಟು ಹುದ್ದೆಗಳು: 3991
- ವೇತನ: ₹37,500 ರಿಂದ ₹76,100
- ಅರ್ಜಿ ಪ್ರಾರಂಭ: 08 ಜೂನ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03 ಜುಲೈ 2026
- ಶುಲ್ಕ ಪಾವತಿ ಕೊನೆಯ ದಿನಾಂಕ: 04 ಜುಲೈ 2026
- ಲಿಖಿತ ಪರೀಕ್ಷೆ: 02 ಆಗಸ್ಟ್ 2026
ವಿದ್ಯಾರ್ಹತೆ
ಅಭ್ಯರ್ಥಿಗಳು PUC ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ
- ಕನಿಷ್ಠ ವಯಸ್ಸು: 18 ವರ್ಷ
- ಸಾಮಾನ್ಯ ವರ್ಗ: 33 ವರ್ಷ
- SC/ST ಹಾಗೂ ಮೀಸಲು ವರ್ಗಗಳು: 35 ವರ್ಷ
- ಬುಡಕಟ್ಟು ಅಭ್ಯರ್ಥಿಗಳು: 38 ವರ್ಷ
ಸರ್ಕಾರದ ನಿಯಮಾನುಸಾರ ವಯೋಸಡಿಲಿಕೆ ಅನ್ವಯವಾಗುತ್ತದೆ.
ಅರ್ಜಿ ಶುಲ್ಕ
- ಸಾಮಾನ್ಯ ಮತ್ತು ಇತರೆ ವರ್ಗಗಳು: ₹750
- SC/ST, Category-1, ಮಾಜಿ ಸೈನಿಕರು ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳು: ₹500
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಆಯ್ಕೆ ಕೆಳಗಿನ ಹಂತಗಳ ಮೂಲಕ ನಡೆಯಲಿದೆ:
- ಲಿಖಿತ ಪರೀಕ್ಷೆ
- ದೈಹಿಕ ಮಾನದಂಡ ಪರೀಕ್ಷೆ (PST)
- ಸಹಿಷ್ಣುತೆ ಪರೀಕ್ಷೆ (ET)
- ವೈದ್ಯಕೀಯ ಪರೀಕ್ಷೆ
- ಅಂತಿಮ ಮೆರಿಟ್ ಪಟ್ಟಿ
ಲಿಖಿತ ಪರೀಕ್ಷೆಯ ವಿವರ
- ಪ್ರಶ್ನೆಗಳು: 100
- ಅಂಕಗಳು: 100
- ಅವಧಿ: 90 ನಿಮಿಷ
- ಋಣಾತ್ಮಕ ಅಂಕ: ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತ
ಪರೀಕ್ಷಾ ವಿಷಯಗಳು
- ಸಾಮಾನ್ಯ ಜ್ಞಾನ
- ವಿಜ್ಞಾನ
- ಭಾರತದ ಸಂವಿಧಾನ
- ಇತಿಹಾಸ
- ಭೂಗೋಳ ಶಾಸ್ತ್ರ
- ಪ್ರಚಲಿತ ಘಟನೆಗಳು
- ಮಾನಸಿಕ ಸಾಮರ್ಥ್ಯ
- ಸಾಮಾನ್ಯ ಅಧ್ಯಯನ
ದೈಹಿಕ ಪರೀಕ್ಷೆ
ಪುರುಷ ಅಭ್ಯರ್ಥಿಗಳಿಗೆ:
- 1600 ಮೀಟರ್ ಓಟ – 6 ನಿಮಿಷ 30 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು
- ಹೈಜಂಪ್ ಅಥವಾ ಲಾಂಗ್ ಜಂಪ್
- ಶಾಟ್ ಪುಟ್
ಮಹಿಳಾ ಅಭ್ಯರ್ಥಿಗಳಿಗೆ:
- 400 ಮೀಟರ್ ಓಟ – 2 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು
- ಹೈಜಂಪ್ ಅಥವಾ ಲಾಂಗ್ ಜಂಪ್ಶಾ
- ಶಾಟ್ ಪುಟ್
ಪ್ರಮುಖ ದಿನಾಂಕಗಳು
- ಅಧಿಸೂಚನೆ ಬಿಡುಗಡೆ: 05-06-2026
- ಅರ್ಜಿ ಆರಂಭ: 08-06-2026
- ಅರ್ಜಿ ಕೊನೆ: 03-07-2026
- ಶುಲ್ಕ ಪಾವತಿ: 04-07-2026
- ಪರೀಕ್ಷೆ: 02-08-2026
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಪ್ರತಿ ಅಭ್ಯರ್ಥಿಯು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಅರ್ಜಿ ಸಲ್ಲಿಸುವುದು ಕಡ್ಡಾಯ.
ಅರ್ಜಿ ಸಲ್ಲಿಸಲು:
https://cetonline.karnataka.gov.in/kea/
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
